ಉತ್ಪಲಮಾಲಾವೃತ್ತದ ಪ್ರತಿ ಸಾಲಿನಲ್ಲೂ ೨೦ ಅಕ್ಷರಗಳಿರುತ್ತವೆ. ಅವುಗಳ ವಿನ್ಯಾಸದಲ್ಲಿ "ಭರನಭಭರಲಗ" ಗಣವಿನ್ಯಾಸವಿರುತ್ತದೆ.(ಲ-ಲಘು, ಗು-ಗುರು) ಸೂತ್ರ ಪದ್ಯ ಹೀಗಿದೆ "ಉತ್ಪಲಮಾಲೆಯಪ್ಪುದುಭರಂನಭಭಂರಲಗಂ ನೆಗಳ್ದಿರಲ್" ಈ ಪದ್ಯಕ್ಕೆ ಪ್ರಸ್ತಾರ ಹಾಕಿದರೂ ಸಹ ಉತ್ಪಲಮಾಲಾ ವೃತ್ತದ ಲಕ್ಷಣ ಗೊತ್ತಾಗುತ್ತದೆ ಕನ್ನಡದ ಆದಿ ಕವಿ ಪಂಪನ ಕೃತಿಯಿಂದಾದಿಯಾಗಿ ಅನೇಕ ಕಡೆಗಳಲ್ಲಿ ಈ ಛಂದಸ್ಸು ಬಳಸಲ್ಪಟ್ಟಿದೆ. ಉದಾಹರಣೆಗೆ ವಿಕ್ರಮಾರ್ಜುನ_ವಿಜಯ ದಲ್ಲಿನ:- ಶ್ರೀಯನರಾತಿ ಸಾಧನಪಯೋನಿಧಿಯೊಳ್ ಪಡೆದುಂ ಧರಿತ್ರಿಯಂ ಜೀಯನೆ ಬೇಡಿಕೊಳ್ಳದೆ ವಿರೋಧಿ ನರೇಂದ್ರರನೊತ್ತಿಕೊಂಡುಮಾ ತ್ಮೀಯ ಸುಪುಷ್ಪಪಟ್ಟಮನೊಡಂಬಡೆ ತಾಳ್ಡಿಯುಮಿಂತುದಾತ್ತ ನಾ ರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯ ಕೋಟಿಯಂ|| (ವಿಕ್ರಮಾರ್ಜುನವಿಜಯ ೧-೧)